ಅಲ್ಲು ಅರ್ಜುನ್ ಚಿತ್ರದ ಈ ಹಾಡು ಗಳಿಸಿದ ವೀವ್ಸ್ ಎಷ್ಟು ಗೊತ್ತಾ?

ಹೈದರಾಬಾದ್| pavithra| Last Modified ಬುಧವಾರ, 25 ನವೆಂಬರ್ 2020 (12:49 IST)
ಹೈದರಾಬಾದ್ : ತೆಲುಗು ನಟ ಅಲ್ಲುಅರ್ಜುನ್ ಟಾಲಿವುಡ್ ನಲ್ಲಿ ಸ್ಟಾರ್ ನಟ ಎನಿಸಿಕೊಂಡಿದ್ದಾರೆ, ಅವರ ಸಿನಿಮಾಗಳು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತದೆ.

ಈ ಹಿಂದೆ ಬಿಡುಗಡೆಯಾದ ಅವರ ‘ವೈಕುಂಠ ಪುಮುಲು’ ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದು ಗಲ್ಲಾ ಪಟ್ಟಿಗೆಯಲ್ಲಿ 200 ಕೋಟಿ ರೂ ಗಳಿಸಿತ್ತು.ಇದೀಗ ಅವರು ತ್ರಿವಿಕ್ರಮ್ ನಿರ್ದೇಶನದಲ್ಲಿ ಪೂಜಾ  ಹೆಗ್ಡೆ ಹಾಗೂ ಅಲ್ಲು ಅರ್ಜುನ್ ನಟಿಸುತ್ತಿದ್ದಾರೆ. ಜಯ ರಾಮ್, ನಿವೇದಾ ಪೆತುರಾಜ್, ಸಮುದ್ರಕಣಿ, ನವದೀಫ್, ಟಬು ಮತ್ತು ಇನ್ನೂ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ದಮನ್ ಅವರ ಸಂಗೀತದಲ್ಲಿನ ಕೈಗೊಂಬೆ ಹಾಡು ಎಲ್ಲರನ್ನೂ ಆಕರ್ಷಿಸುತ್ತಿದೆ. ಸೆಲೆಬ್ರಿಟಿಗಳು ಕೂಡ ಹಾಡಿಗೆ ನೃತ್ಯ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಹಾಡು 450 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :