ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಬುಲ್ ಬುಲ್ ಚಿತ್ರದ ಮೂಲಕ ರಜತ ಪರದೆಯಲ್ಲಿ ತನ್ನ ಪ್ರತಿಭೆ ತೋರಲು ಆರಂಭ ಮಾಡಿದ ಈ ಕಲಾವಿದೆ ಆ ಬಳಿಕ ಹೆಚ್ಚು ಚಿತ್ರಗಳನ್ನು ದರ್ಶನ್ ಅವರ ಜೊತೆ ನಟಿಸಿದಳು. ಅಲ್ಲದೆ ಆತನ ಜೊತೆ ಅಭಿನಯಿಸುವುದು ತನಗೆ ಹೆಚ್ಚಿನ ಕಂಫರ್ಟ್ ಎಂದು ಹೇಳಿ ಎಲ್ಲರ ಚಿತ್ತ ಇವರಿಬ್ಬರತ್ತ ಹೋಗುವಂತೆ ಮಾಡಿದ್ದು ಹಳೆಯ ಸುದ್ದಿ. ಆದರೆ ವೈಯಕ್ತಿಕವಾಗಿ ಆಕೆಗೆ ದರ್ಶನ್ ಅತ್ಯುತ್ತಮ ಸ್ನೇಹಿತನಂತೆ ಆಗಿದ್ದಾರಂತೆ.