ಮಡಿಕೇರಿ : ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ತಾವು ಮೂರು ತಿಂಗಳಲ್ಲಿ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹುಚ್ಚ ವೆಂಕಟ್ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ತಮ್ಮ ಮದುವೆ ವಿಚಾರವನ್ನು ರಿವೀಲ್ ಮಾಡಿದ್ದಾರೆ. ನನ್ನ ಸಂಬಂಧಿಕರಾದ ಮಾಧ್ಯಮದವರನ್ನು ಮದುವೆಗೆ ತಪ್ಪದೇ ಕರೆಯುತ್ತೇನೆ. ಆದರೆ, ಪೆನ್ನು, ಕ್ಯಾಮರಾ ಬದಿಗಿಟ್ಟು ಮದುವೆಗೆ ಬರಬೇಕೆಂದು ಅವರು ಆಹ್ವಾನ ನೀಡಿದ್ದಾರೆ. ಆದರೆ ಹುಡುಗಿ ಮಾತ್ರ ಯಾರೆಂಬುದನ್ನು ತಿಳಿಸಿಲ್ಲ.