ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?

ಚೆನ್ನೈ| pavithra| Last Modified ಶನಿವಾರ, 9 ಜನವರಿ 2021 (17:32 IST)
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ನಟ ವಿಜಯ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ಮಾಸ್ಟರ್ ಇದೇ ಜನವರಿ 13ರಂದು ಬಿಡುಗಡೆಯಾಗಲಿದೆ.

ಲೋಕೇಶ್ ಕನಗರಾಜ್ ಅವರೊಂದಿಗೆ ಚಿತ್ರಕಥೆಯನ್ನು ಬರೆದ ರತ್ನಕುಮಾರ್ ಮತ್ತು ಬಾನ್ ಪಾರ್ತಿಬನ್  ಅವರು ಮಾಸ್ಟರ್ ಚಿತ್ರದ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಅವರು ಖಳನಾಯಕನಾಗಿ ನಟಿಸಿದ್ದಾರೆ. ಆದರೆ ಈ ಪಾತ್ರಕ್ಕೆ ವಿಜಯ್ ಸೇತುಪತಿಯನ್ನು ಆಯ್ಕೆ ಮಾಡುವ ಮೊದಲು ನಟ ಮಾಧವನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಅವರು ತಮ್ಮ ಚಿತ್ರವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದ ಕಾರಣ ಈ ಚಿತ್ರತಂಡ ಸೇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಧವನ್ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :