ಬೆಂಗಳೂರು : ಸ್ಯಾಂಡಲ್ ವುಡ್ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ತಮ್ಮ ಅಚ್ಚುಮೆಚ್ಚಿನ ನಾಯಿ ಮರಿಯನ್ನು ಕಳೆದುಕೊಂಡು ಇದೀಗ ದುಖಃದಲ್ಲಿದ್ದಾರಂತೆ. ರಕ್ಷಿತಾ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ. ಅವರ ಮನೆಯಲ್ಲಿ ಎರಡು ಸಾಕು ನಾಯಿಗಳಿದ್ದು ಅದರಲ್ಲಿ ಹ್ಯಾಪಿ ಎಂಬ ನಾಯಿ ಮೃತಪಟ್ಟಿದೆ. ಈ ಹ್ಯಾಪಿ ಚೀನಾ ಮೂಲದ ಚಿಕ್ಕಮರಿ ಆಗಿದ್ದು, ಪಗ್ ಜಾತಿಗೆ ಸೇರಿದೆ. ಪಗ್ ಜಾತಿಯ ನಾಯಿಗಳು 12 ರಿಂದ 15 ವರ್ಷಗಳ ಕಾಲ ಬದುಕುತ್ತದೆ.