ಬೆಂಗಳೂರು: ಡಾಲಿ ಧನಂಜಯ್ ಸಿಂಗಲ್ಲಾ? ಈ ಒಂದು ಪ್ರಶ್ನೆಯನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆಯಲ್ಲಿ ಕೇಳಿದ್ದಾರೆ.ಇದಕ್ಕೆ ಧನಂಜಯ್ ನಾನಿನ್ನೂ ಸಿಂಗಲ್. ಒಬ್ಬರೇ ಇರುವುದು ಖುಷಿ ಕೊಡುತ್ತದೆ ಎಂದು ಹೇಳಿ ನಾಚಿಕೊಂಡಿದ್ದಾರೆ. ಇದನ್ನು ನೋಡಿ ಕಿಚ್ಚ ಸುದೀಪ್ ಜೋರಾಗಿ ನಕ್ಕಿದ್ದಾರೆ. ಅವರ ಈ ನಗು ಅಭಿಮಾನಿಗಳಿಗೆ ಯಾಕೋ ಧನಂಜಯ್ ಹೇಳಿಕೆ ಮೇಲೆ ಅನುಮಾನ ಮೂಡಿಸಿದೆ.ಧನಂಜಯ್-ಅಮೃತಾ ಅಯ್ಯಂಗಾರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಗೆ ಅನುಮಾನವಿದೆ. ಆದರೆ ಇಬ್ಬರೂ ಇದನ್ನು ನಿರಾಕರಿಸಿದ್ದಾರೆ.