ಬೆಂಗಳೂರು: ಇಂದು ನಟಿ ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬವಾಗಿದ್ದು, ಹುಟ್ಟುಹಬ್ಬಕ್ಕೆ ಡಾಲಿ ಧನಂಜಯ್ ವಿಶ್ ಮಾಡಿದ್ದಾರೆ. ಡಾಲಿ-ಅಮೃತಾ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಕೆಲವು ದಿನಗಳ ಮೊದಲು ಗಾಸಿಪ್ ಹಬ್ಬಿತ್ತು. ಇದಕ್ಕೆ ಅಮೃತಾ ಅದೆಲ್ಲಾ ಸುಳ್ಳು ಎಂದಿದ್ದರು. ಹಾಗಿದ್ದರೂ ಈ ಜೋಡಿ ಮತ್ತೆ ಈಗ ತೆರೆ ಮೇಲೆ ಹೊಯ್ಸಳ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಜೊತೆಗೆ ಇಂದು ಅಮೃತಾ ಹುಟ್ಟುಹಬ್ಬಕ್ಕೆ ಹೊಯ್ಸಳ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿರುವುದಲ್ಲದೆ, ಡಾಲಿ ಧನಂಜಯ್ ತಮ್ಮಿಬ್ಬರ ಸುಂದರ ಕ್ಷಣದ