ಆರ್ ಆರ್ ಆರ್ ಚಿತ್ರ ಅಕ್ಟೋಬರ್ 13ರಂದು ಬಿಡುಗಡೆಯಾಗುವುದು ಡೌಟ್?

ಹೈದರಾಬಾದ್| pavithra| Last Modified ಭಾನುವಾರ, 2 ಮೇ 2021 (11:29 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ರಾಜಮೌಳಿ ಅವರ ನಿರ್ದೇಶನದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿಆರ್ ಅವರ ಅಭಿನಯದ ‘ಆರ್ ಆರ್ ಆರ್’ ಚಿತ್ರ ಈ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ  ನಿರ್ಮಾಪಕರು ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇನ್ನೂ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿಲ್ಲ. ಸಾಕಷ್ಟು ಬಾಕಿ ಇದೆ, ರಾಮ್ ಚರಣ್ ಅವರು ಆಚಾರ್ಯ ಚಿತ್ರದಲ್ಲಿ ನಿರತರಾಗಿರುವುದರಿಂದ ಈ ಚಿತ್ರ ಚಿತ್ರೀಕರಣ ಬಾಕಿ ಉಳಿದಿದೆ. ಈ ಮೊದಲು ಚಿತ್ರತಂಡ ಜುಲೈ 2021ರ ವೇಳೆಗೆ ಸಂಪೂರ್ಣ ಚಿತ್ರೀಕರಣ ಮುಗಿಸಲು ಯೋಚಿಸಿದ್ದರು.

ಆದರೆ ಇದೀಗ ಕೊರೊನಾ 2ನೇ ಅಲೆಯ ಪ್ರಭಾವದಿಂದಾಗಿ ಅಕ್ಟೋಬರ್ ವೇಳೆಗೆ ಚಿತ್ರೀಕರಣ ಮುಗಿಯುವ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಚಿತ್ರದ ಬಿಡುಗಡೆಯ ದಿನವನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಅಲ್ಲದೇ 2022ರ ಜನವರಿ ವೇಳೆಗೆ ಚಿತ್ರ  ಬಿಡುಗಡೆಯಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.



ಇದರಲ್ಲಿ ಇನ್ನಷ್ಟು ಓದಿ :