ಮಂಗಳೂರು: ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತ ವೀಕ್ಷಿಸಿದ್ದಾರೆ.ನಿನ್ನೆ ಮಂಗಳೂರಿನ ಭಾರತ್ ಮಾಲ್ ನ ಥಿಯೇಟರ್ ನಲ್ಲಿ ವೀರೇಂದ್ರ ಹೆಗ್ಗಡೆಯವರು ಪತ್ನಿ ಹೇಮಾವತಿ ಮತ್ತು ಮೊಮ್ಮಕ್ಕಳ ಜೊತೆ ಕೂತು ಸಿನಿಮಾ ವೀಕ್ಷಿಸಿದ್ದಾರೆ.ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿರುವ ಹೆಗ್ಗಡೆಯವರು, ‘ಸಿನಿಮಾ ನೋಡಿ ಬಹಳ ದಿನಗಳಾಗಿತ್ತು. ಈಗ ಒಂದು ವಿಭಿನ್ನ ಸಿನಿಮಾ ನೋಡಿದೆ.ದೈವಾರಾಧನೆಯ ಸೂಕ್ಷ್ಮತೆಯನ್ನು ರಿಷಬ್ ಬಹಳ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಸಹಬಾಳ್ವೆಯ