ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅಭಿನಯದಲ್ಲಿ ಮೇರು ಪರ್ವತ. ಹಾಗೆಯೇ ಸುಮಧುರ ಕಂಠವನ್ನೂ ಹೊಂದಿದ್ದರು. ಅವರ ಹೆಚ್ಚಿನ ಸಿನಿಮಾಗಳಿಗೆ ಅವರೇ ಹಾಡಿದ್ದರು. ಅಷ್ಟೇ ಅಲ್ಲ. ಭಕ್ತಿಗೀತೆಗಳನ್ನೂ ಹಾಡಿದ್ದಾರೆ.ಹಾಡುಗಳಿಗೆ ಜೀವ ತುಂಬಿ ಹಾಡುವ ಯಾವುದೇ ಕಲ್ಮಶವಿಲ್ಲದ ಮನಸ್ಸು, ಧ್ವನಿಯ ಒಡೆಯ ಅಣ್ಣಾವ್ರು. ಅವರ ಹಾಡುಗಳು ಎಂದೆಂದಿಗೂ ಸೂಪರ್ ಹಿಟ್. ಹಾಗಿದ್ದರೆ ಅವರು ಎಷ್ಟು ಸಿನಿಮಾ ಹಾಡು ಹಾಡಿದ್ದಾರೆ? ಎಷ್ಟು ಭಕ್ತಿ ಗೀತೆ ಹಾಡಿದ್ದಾರೆ?ಡಾ.ರಾಜ್ ಸಿನಿಮಾಗಳಲ್ಲಿ ಸುಮಾರು 300 ಹಾಡುಗಳನ್ನು ಹಾಡಿದ್ದಾರೆ.