ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕುಕನೂರಿನ ಗುದ್ನೇಶ್ವರ ಸ್ವಾಮಿಯ ಮಹಾರಥೋತ್ಸವ ಡಿ.13 ರಂದು ಸಂಜೆ 04 ಗಂಟೆಗೆ ನೆರವೇರಲಿದ್ದು, ಇದರ ಅಂಗವಾಗಿ ಜರುಗಲಿರುವ ಜೀ-ಕನ್ನಡ ವಾಹಿನಿಯ ಸರಿಗಮಪ ದಲ್ಲಿ ಖ್ಯಾತಿ ಗಳಿಸಿದ ಗಾಯಕರು, ಡ್ರಾಮಾ ಜೂನಿಯರ್ ಲಿಟ್ಲ್ಚಾಂಪ್ಸ್ ಮಕ್ಕಳ ಮನರಂಜನೆಯಂತಹ ಆಕರ್ಷಕ ಕಾರ್ಯಕ್ರಮಗಳು ಇವೆ. ಬಿನ್ನಾಳ ಗ್ರಾಮದ ಬಸವೇಶ್ವರ ದೇವಸ್ಥಾನ ನಂದಿಕೋಲ ಸೇವೆ ಹಾಗೂ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವೆ ಹಾಗೂ ಸಕಲ ವಾದ್ಯಗಳೊಂದಿಗೆ ಮಹಾರಥೋತ್ಸವವು