ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ ಲಾಕ್ ಡೌನ್ ಕಾರಣದಿಂದ ಸ್ಥಗಿತಗೊಂಡಿದೆ. ಇದೇ ಬೇಸರದಲ್ಲಿ ನಿರ್ಮಾಪಕ ಕೃಷ್ಣ ಕೇಂದ್ರಕ್ಕೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದಾರೆ!ಈ ಧಾರವಾಹಿ ಮಾತ್ರವಲ್ಲ, ಉದಯ, ಕಲರ್ಸ್ ವಾಹಿನಿಯ ಅನೇಕ ಧಾರವಾಹಿಗಳೂ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಂಕಷ್ಟದಿಂದಾಗಿ ಅರ್ಧಕ್ಕೇ ಪ್ರಸಾರ ನಿಲ್ಲಿಸಿವೆ. ಇದರ ಬಗ್ಗೆ ಕೃಷ್ಣ ಧ್ವನಿಯೆತ್ತಿದ್ದಾರೆ.ಸುಬ್ಬಲಕ್ಷ್ಮಿ ಧಾರವಾಹಿ ನಿರ್ಮಾಣ ಕೃಷ್ಣ ಹಾಗೂ ಅವರ ಪತ್ನಿ ಸ್ವಪ್ನಾ ಕೃಷ್ಣ ಅವರದ್ದಾಗಿತ್ತು.