ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಮಲಯಾಳಂ ದೃಶ್ಯಂ 2 ಸಿನಿಮಾ ರಿಮೇಕ್ ದಶ್ಯ 2 ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ರವಿಚಂದ್ರನ್, ನಿರ್ದೇಶಕ ಪಿ. ವಾಸು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ.ಈ ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ತಮಗಿರುವ ವಿಶೇಷ ಒಲವನ್ನು ರವಿಚಂದ್ರನ್ ಹಂಚಿಕೊಂಡಿದ್ದಾರೆ. ನನಗೆ ಇದು ಮತ್ತೊಂದು ಕುಟುಂಬವಿದ್ದಂತೆ. ಹಾಗಂತ ನಾನು ಸುಮ್ಮನೇ ಬಾಯಿ ಮಾತಿಗೆ ಹೇಳುತ್ತಿಲ್ಲ. ನಿಜವಾಗಿಯೂ