ಬೆಂಗಳೂರು: ಡ್ರಗ್ ಮಾಫಿಯಾದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಯನ್ನು ಮೆಚ್ಚಿ ಪ್ರಪೋಸ್ ಮಾಡಿದ್ದನ್ನು ಇನ್ನೊಬ್ಬ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಒಪ್ಪಿಕೊಂಡಿದ್ದಾರೆ. ನಿನ್ನೆ ಆರೋಪಿ ಶಿವಪ್ರಕಾಶ್ ನನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ರಾಗಿಣಿ ಜೊತೆಗಿನ ತನ್ನ ಸಂಬಂಧವನ್ನು ಬಾಯ್ಬಿಟ್ಟಿದ್ದಾನೆ. ರಾಗಿಣಿಯನ್ನು ಇಷ್ಟಪಟ್ಟು 2017 ರಲ್ಲಿ ಮದುವೆಯಾಗಲು ಪ್ರಪೋಸ್ ಮಾಡಿದ್ದೆ. ಆದರೆ ಅವರು ಸದ್ಯಕ್ಕೆ ವೃತ್ತಿ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದರು. ನಮ್ಮಿಬ್ಬರ ನಡುವೆ 16 ವರ್ಷ ಅಂತರವಿತ್ತು.