ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗಕ್ಕೆ ಈಗ ಡ್ರಗ್ ಮಾಫಿಯಾ ಬರಸಿಡಿಲಿನಂತೆ ಬಂದೆರಗಿದೆ. ಡ್ರಗ್ ಮಾಫಿಯಾ ಮುಂಬರುವ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಾ? ಇದು ಆರೋಪಿಗಳಾಗಿರುವವರಿಗೆ ಮಾತ್ರ ಸೀಮಿತವಾ?ಈಗಾಗಲೇ ಸಿಸಿಬಿಯಿಂದ ಬಂಧಿತರಾಗಿರುವ ರಾಗಿಣಿ ಕೆಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಚಿತ್ರೀಕರಣಕ್ಕೆ ಅವರ ಸದ್ಯದ ಪರಿಸ್ಥಿತಿ ಅಡ್ಡಿಯಾಗಲಿದೆ. ಅಲ್ಲದೆ, ಅಭಿಮಾನಿಗಳು ಮುಂದೆ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೂ ನಿರ್ಮಾಪಕರಿಗೆ ತಲೆನೋವಾಗಲಿದೆ. ಇದಲ್ಲದೆ, ಇನ್ನೂ ಮತ್ತಷ್ಟು ನಟ-ನಟಿಯರು ಸಿಸಿಬಿ