ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಕೆಲವು ನಟಿಯರು ಸಿಲುಕಿದ್ದಾರೆ. ನಟಿ ರಾಗಿಣಿ, ಸಂಜನಾ ಈಗಾಗಲೇ ಬಂಧನಕ್ಕೆ ಒಳಗಾಗಿದ್ದಾರೆ. ಈ ನಡುವೆ ಸಿನಿಮಾದ ಕೆಲವು ಸ್ಟಾರ್ ನಟರೂ ಡ್ರಗ್ಸ್ ಜಾಲದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಬಂಧಿತರಾಗಿರುವ ನಟಿ ರಾಗಿಣಿ, ಸಂಜನಾ ಅವರು ಈಗಾಗಲೇ ವಿಚಾರಣೆ ವೇಳೆ ಸ್ಟಾರ್ ನಟರು, ರಾಜಕಾರಣಿಗಳ ಮಕ್ಕಳು, ವಿವಿಐಪಿಗಳ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಿನಿಮಾದ ಸ್ಟಾರ್ ನಟರಿಗೆ ಹೈಟೆನ್ಶನ್ ಶುರುವಾಗಿದೆ ಎನ್ನಲಾಗುತ್ತಿದೆ.