ನಟ ದುನಿಯಾ ವಿಜಯ್ ಅವರು ಎರಡು ಆಟೋ ರಿಕ್ಷಾಗಳನ್ನು ಅಂಗವಿಕಲ ಮತ್ತು ಅನಾಥರೊಬ್ಬರಿಗೆ ಉಚಿತವಾಗಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ ಕನಕ ಚಿತ್ರದಲ್ಲಿ ಅವರು ಆಟೋ ಚಾಲಕರಾಗಿ ಅಭಿನಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಆಟೋಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಇದೇ ತಿಂಗಳು 20ಕ್ಕೆ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅಂದು ಆಟೋಗಳನ್ನು ವಿತರಿಸಲಿದ್ದಾರೆ. ಇದಕ್ಕಾಗಿ ಇಬ್ಬರು ಸೂಕ್ತ ಅಭ್ಯರ್ಥಿಗಳನ್ನೂ ಅವರು ಆಯ್ಕೆ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಕೈಗೆ ಆಟೋ ಕೀಲಿಕೈ