ದುನಿಯಾ ವಿಜಯ್ ಮದುವೆಗೆ ಬರಬೇಕೆಂದು ವಧು ರಂಪಾಟ

ದಾವಣಗೆರೆ| Krishnaveni K| Last Modified ಬುಧವಾರ, 24 ನವೆಂಬರ್ 2021 (11:15 IST)
ದಾವಣಗೆರೆ: ತನ್ನ ಮದುವೆಗೆ ಮೆಚ್ಚಿನ ನಟ ದುನಿಯಾ ವಿಜಯ್ ಬಂದು ಆಶೀರ್ವಾದ ಮಾಡಲೇಬೇಕು ಎಂದು ದಾವಣಗೆರೆಯಲ್ಲಿ ವಧು ರಂಪಾಟ ಮಾಡಿದ ಘಟನೆ ನಡೆದಿದೆ.

ದಾವಣಗೆರೆಯ ಶ‍್ರೀರಾಮ ನಗರದಲ್ಲಿ ಅನುಷಾ ಎಂಬ ವಧುವಿನ ಮದುವೆ ಪ್ರಕಾಶ್ ಎಂಬವರೊಂದಿಗೆ ನವಂಬರ್ 29 ಕ್ಕೆ ನಿಗದಿಯಾಗಿದೆ. ವಧು ಅನುಷಾ ದುನಿಯಾ ವಿಜಿಯ ದೊಡ್ಡ ಅಭಿಮಾನಿ. ಆಕೆಯ ತಂದೆಯೂ ವಿಜಿ ಅಭಿಮಾನಿ. ಗೃಹಪ್ರವೇಶವನ್ನೂ ವಿಜಿ ಕೈಯಲ್ಲೇ ಮಾಡಿಸಿದ್ದರಂತೆ.


ತನ್ನ ಮದುವೆಗೂ ವಿಜಿ ಬರಲೇಬೇಕು. ಇಲ್ಲವಾದರೆ ತಾಳಿ ಕಟ್ಟಿಸಿಕೊಳ್ಳಲ್ಲ ಎಂದು ಅನುಷಾ ಹಠ ಹಿಡಿದಿದ್ದಾಳೆ. ಇದೀಗ ಅಭಿಮಾನಿಯ ಹಠಕ್ಕೆ ಮಣಿದು ವಿಜಿ ಮದುವೆಗೆ ಬರುತ್ತಾರಾ ಕಾದು ನೋಡಬೇಕು.


ಇದರಲ್ಲಿ ಇನ್ನಷ್ಟು ಓದಿ :