ಕಾಡ್ಗಿಚ್ಚು ನಂದಿಸಲು ಪತ್ನಿ ಸಮೇತ ಕಾಡಿಗೆ ತೆರಳಿದ ದುನಿಯಾ ವಿಜಯ್

ಬೆಂಗಳೂರು| Krishnaveni K| Last Modified ಮಂಗಳವಾರ, 26 ಫೆಬ್ರವರಿ 2019 (09:49 IST)
ಬೆಂಗಳೂರು: ಬಂಡೀಪುರದಲ್ಲಿ ಎದ್ದಿರುವ ಕಾಡ್ಗಿಚ್ಚು ನಂದಿಸಲು ಹಲವರು ಸ್ವಯಂ ಸೇವೆ ಮಾಡುತ್ತಿದ್ದಾರೆ. ಅಂತಹ ಸ್ವಯಂ ಸೇವಕರ ಜತೆ ಇದೀಗ ಸ್ಯಾಂಡಲ್ ವುಡ್ ಮಂದಿಯೂ ಕೈ ಜೋಡಿಸುತ್ತಿದ್ದಾರೆ.
 
ಇದೀಗ ನಟ ದುನಿಯಾ ವಿಜಯ್ ಮತ್ತು ಪತ್ನಿ ಕೀರ್ತಿ ಗೌಡ ನೇರವಾಗಿ ಬಂಡೀಪುರ ಅರಣ್ಯ ವಲಯಕ್ಕೆ ತೆರಳಿದ್ದು, ಕಾಡ್ಗಿಚ್ಚು ನಂದಿಸುವ ಸ್ವಯಂ ಸೇವಕರಿಗೆ ಕೈ ಜೋಡಿಸಿದ್ದಾರೆ.
 
ಅಷ್ಟೇ ಅಲ್ಲ, ಸ್ವಯಂ ಸೇವಕರಿಗೆ ಅಗತ್ಯ ವಸ್ತುಗಳಾದ ನೀರು, ಬಿಸ್ಕತ್ತು ತೆಗೆದುಕೊಂಡು ಹೋಗಿ ಹಂಚಿದ್ದಾರೆ. ಈಗಾಗಲೇ ದರ್ಶನ್ ಸೇರಿದಂತೆ ಹಲವರು ಬಂಡೀಪುರ ಕಾಡ್ಗಿಚ್ಚು ನಂದಿಸಲು ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :