ಅಲ್ಲೀ ತನಕ ‘ಸಲಗ’ ರಿಲೀಸ್ ಮಾಡಲ್ವಂತೆ ದುನಿಯಾ ವಿಜಯ್

ಬೆಂಗಳೂರು| Krishnaveni K| Last Modified ಶುಕ್ರವಾರ, 16 ಏಪ್ರಿಲ್ 2021 (09:34 IST)
ಬೆಂಗಳೂರು: ಕೊರೋನಾದಿಂದಾಗಿ ರಾಜ್ಯ ಸರ್ಕಾರ ಥಿಯೇಟರ್ ಗಳಿಗೆ ಶೇ.50 ರಷ್ಟು ಮಿತಿ ಹೇರಿದೆ. ಇದರಿಂದಾಗಿ ಸ್ಟಾರ್ ನಟರು ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
 > ಎಲ್ಲಾ ಸರಿ ಹೋಗಿದ್ದರೆ ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿದ ‘ಸಲಗ’ ಸಿನಿಮಾ ಕೂಡಾ ಇದೇ ವಾರ ಬಿಡುಗಡೆಯಾಗಬೇಕಿತ್ತು. ಆದರೆ ಸರ್ಕಾರ ಮತ್ತೆ ಥಿಯೇಟರ್ ಗಳಿಗೆ ಮಿತಿ ಹೇರಿದ್ದರಿಂದ ವಿಜಯ್ ಸಿನಿಮಾ ಬಿಡುಗಡೆ ಮಾಡದೇ ಇರಲು ತೀರ್ಮಾನಿಸಿದರು.>   ಇನ್ನು, ಸರ್ಕಾರ ಯಾವಾಗ ಮತ್ತೆ ಥಿಯೇಟರ್ ಗಳಿಗೆ ಶೇ.100 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುತ್ತದೋ ಅಲ್ಲಿಯವರೆಗೆ ಸಿನಿಮಾ ರಿಲೀಸ್ ಮಾಡಲ್ಲ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ಅಭಿಮಾನಿಗಳಿಗೆ ದರ್ಶನ ಭಾಗ್ಯವಿಲ್ಲ.ಇದರಲ್ಲಿ ಇನ್ನಷ್ಟು ಓದಿ :