ಬೆಂಗಳೂರು: ದುನಿಯಾ ವಿಜಯ್ ಎಂದರೆ ಆಗಾಗ ಕೆಟ್ಟ ಕಾರಣಗಳಿಂದಾಗಿಯೇ ಸುದ್ದಿಯಲ್ಲಿರುತ್ತಾರೆ. ಅವರೊಂಥರಾ ಬ್ಯಾಡ್ ಬಾಯ್ ಇಮೇಜ್ ಪಡೆದುಕೊಂಡ ಒಳ್ಳೆಯ ನಟ. ತಮ್ಮನ್ನು ಜನ ನೋಡುವ ದೃಷ್ಟಿಯೇ ಹಾಗಾಗಿದೆ ಎನ್ನುತ್ತಾರವರು. ಆದರೆ ನಾನಿರೋದು ಹಾಗಲ್ಲ. ನನ್ನ ಮನಸು ಹಾಗಲ್ಲ ಎಂದು ಜನಕ್ಕೆ ತೋರಿಸಬೇಕು ಎಂದು ಆತ್ಮಕತೆ ಬರೆಯಲು ಹೊರಟಿದ್ದಾರಂತೆ ವಿಜಿ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಈಗಾಗಲೇ ಸಾಕಷ್ಟು ಪುಸ್ತಕಗಳನ್ನು ಖರೀದಿಸಿ, ಓದುತ್ತಿದ್ದಾರಂತೆ. ಆ ಮೂಲಕ ತನ್ನ ಆತ್ಮಕತೆ ಬರೆಯುವ ಶೈಲಿ