ಬಿಗ್ ಬಾಸ್ ನಲ್ಲಿ ಈ ವಾರ ಎಲಿಮಿನೇಟ್ ಆಗೋರು ಯಾರು?

ಬೆಂಗಳೂರು| Krishnaveni K| Last Modified ಶನಿವಾರ, 14 ಡಿಸೆಂಬರ್ 2019 (08:39 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಇಂದು ಮತ್ತು ನಾಳೆ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಇಂದು ಮತ್ತು ನಾಳೆ ವಾರದ ಕತೆ ಕಿಚ್ಚನ ಜತೆ ನಡೆಯಲಿದ್ದು, ಹೊರಹೋಗುವ ಸ್ಪರ್ಧಿಯ ಹೆಸರನ್ನು ಕಿಚ್ಚ ಸುದೀಪ್ ಬಹಿರಂಗಪಡಿಸಲಿದ್ದಾರೆ.

 
ಈ ವಾರ ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಯಾರೇ ಹೊರಹೋದರೂ ಪ್ರಮುಖ ಸ್ಪರ್ಧಿಯೊಬ್ಬರ ಪ್ರಯಾಣ ಕೊನೆಗೊಳ್ಳುವುದು ಖಚಿತ.
 
ರಾಜು ತಾಳಿಕೋಟೆ, ವಾಸುಕಿ ವೈಭವ್, ಶೈನ್ ಶೆಟ್ಟಿ, ಚೈತ್ರಾ ಕೋಟೂರು, ಭೂಮಿ ಶೆಟ್ಟಿ, ಚಂದನ್ ಆಚಾರ್ ಮತ್ತು ಕಿಶನ್ ನಾಮಿನೇಟ್ ಆಗಿದ್ದಾರೆ. ಈ ಪೈಕಿ ಯಾರು ಹೊರಹೋಗಲಿದ್ದಾರೆ ಎನ್ನುವುದು ಇಂದು ಅಥವಾ ನಾಳೆ ಗೊತ್ತಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :