ಬೆಂಗಳೂರು: ಸ್ಟಾರ್ ನಟರು ಎಂದ ಮೇಲೆ ಸತ್ಯವೋ, ಸುಳ್ಳೋ ದಿನಾ ಒಂದೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ಇದೀಗ ಕಿಚ್ಚ ಸುದೀಪ್ ಬಗ್ಗೆ ನಕಲಿ ಸುದ್ದಿಯೊಂದು ಓಡಾಡುತ್ತಿದ್ದು, ನಟನನ್ನು ಫಜೀತಿಗೆ ಸಿಲುಕಿಸಿದೆ.ಕಿಚ್ಚ ಸುದೀಪ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಇದಕ್ಕೆ ನಮಸ್ತೆ ಘೋಷ್ ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ‘ಸಾಹೋ’ ಸಿನಿಮಾ ಖ್ಯಾತಿಯ ನಿರ್ದೇಶಕ ಸುಜಿತ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇದನ್ನೇ ಸತ್ಯವೆಂದು ನಂಬಿ ಹಲವರು ಈ ಸುದ್ದಿಯನ್ನು