ನಿಮ್ಮನ್ನು ಮದುವೆಯಾಗ್ತೀನಿ ಎಂದ ಅಭಿಮಾನಿಗೆ ಖುಷ್ಬೂ ಹೇಳಿದ್ದೇನು ಗೊತ್ತಾ?

ಚೆನ್ನೈ| Krishnaveni K| Last Modified ಬುಧವಾರ, 25 ಆಗಸ್ಟ್ 2021 (09:10 IST)
ಚೆನ್ನೈ: ಬಹುಭಾಷಾ ನಟಿ ಖುಷ್ಬೂ ಎಂದರೆ ಈಗಲೂ ಆರಾಧಿಸುವ ಎಷ್ಟೋ ಅಭಿಮಾನಿಗಳಿದ್ದಾರೆ. ವಯಸ್ಸಾದರೂ ಅವರ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ.  
> ಖುಷ್ಬೂ ತಮ್ಮ ಗ್ಲಾಮರಸ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಅಭಿಮಾನಿಯೊಬ್ಬ ಖುಷ್ಬೂಗೆ ನಿಮ್ಮನ್ನು ಮದುವೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದಾನೆ.>   ಇದಕ್ಕೆ ಪ್ರತಿಕ್ರಿಯಿಸಿರುವ ಖುಷ್ಬೂ ‘ಓ ಕ್ಷಮಿಸಿ. ನೀವು ತುಂಬಾ ತಡ ಮಾಡಿದಿರಿ. ಹಾಗಿದ್ದರೂ ನನ್ನ ಗಂಡನನ್ನೊಮ್ಮೆ ಕೇಳಿ ನೋಡ್ತೀನಿ’ ಎಂದು ತಮಾಷೆಯಾಗಿ ಹೇಳಿದ್ದಾರೆ. ಖುಷ್ಬೂ ಈ ಕಾಮೆಂಟ್ ಹಲವರನ್ನು ನಗೆಗಡಲಲ್ಲಿ ತೇಲಿಸಿದೆ.ಇದರಲ್ಲಿ ಇನ್ನಷ್ಟು ಓದಿ :