ಹೈದರಾಬಾದ್: ಅಲವೈಕುಂಠಪುರಮುಲೊ ಸಿನಿಮಾ ಮೂಲಕ ಯುವ ಜನಾಂಗದ ಮನಸ್ಸು ಕದ್ದಿದ್ದ ಚೆಲುವೆ ಪೂಜಾ ಹೆಗ್ಡೆಗೆ ಅಭಿಮಾನಿ ಹುಡುಗ ಕನ್ನಡದಲ್ಲಿ ಪ್ರಪೋಸ್ ಮಾಡಿದ್ದಾನೆ.ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಪೂಜಾ ಅತಿಥಿಯಾಗಿ ಈ ವಾರ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಪೂಜಾಗಾಗಿ ಹಾಡು ಹಾಡಿ ಸ್ಪರ್ಧಿಯೊಬ್ಬರು ಕನ್ನಡದಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.‘ನಾನು ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಕನ್ನಡದಲ್ಲೇ ಹೇಳಿ ಸ್ಪರ್ಧಿ ಪೂಜಾ ಮನ ಗೆಲ್ಲುತ್ತಾನೆ. ಈ ಪ್ರೋಮೋ