Widgets Magazine

ಡಿ ಬಾಸ್ ದರ್ಶನ್ ಫ್ಯಾನ್ಸ್ ಗೆ ಕಿಚ್ಚ ಸುದೀಪ್ ಫ್ಯಾನ್ಸ್ ಸವಾಲು

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (17:10 IST)
ಬೆಂಗಳೂರು: ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ರಾಕೇಶ್ ನನಗೆ ಡಿ ಬಾಸ್ ಇಷ್ಟ ಅದಕ್ಕೇ ಸಿನಿಮಾ ಪೈರಸಿ ಮಾಡಿದೆ ಎಂದಿದ್ದೇ ತಡ ಮತ್ತೆ ಕಿಚ್ಚ ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ಕೆಸರೆರಚಾಟ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

 
ಕಿಚ್ಚ ಸುದೀಪ್ ಸಿನಿಮಾವನ್ನು ಪೈರಸಿ ಮಾಡಲು ದರ್ಶನ್ ಮೇಲಿನ ಅಭಿಮಾನವೇ ಕಾರಣ ಎಂದು ಆರೋಪಿ ನೀಡಿದ ಹೇಳಿಕೆ ಲೀಕ್ ಆಗುತ್ತಿದ್ದಂತೇ ಕಿಚ್ಚನ ಅಭಿಮಾನಿಗಳು ಇದಕ್ಕೇನಂತೀರಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿಮಾನಿಗಳಲ್ಲಿ ಪ್ರಶ್ನಿಸಲು ಶುರು ಮಾಡಿದ್ದಾರೆ.
 
ನಿಮ್ಮಂತಹವರು ಎಷ್ಟೇ ಜನ ಬಂದರೂ ನಮ್ಮ ಕಿಚ್ಚನನ್ನು ತುಳಿಯಲು ಸಾಧ‍್ಯವಿಲ್ಲ ಎಂದು  ಅಭಿಮಾನಿಗಳು ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಖಂಡಿತವಾಗಿಯೂ ಇದಕ್ಕೆ ದರ್ಶನ್ ಅಭಿಮಾನಿಗಳು ತಿರುಗೇಟು ಕೊಟ್ಟೇ ಕೊಡುತ್ತಾರೆ. ಅಂತೂ ಯಾರೋ ಒಬ್ಬ ತಿಳಿಗೇಡಿ ಮಾಡಿದ ಕೆಲಸದಿಂದ ಮತ್ತೆ ಸ್ಯಾಂಡಲ್ ವುಡ್ ನ ಇಬ್ಬರು ದಿಗ್ಗಜ ನಟರು ಮತ್ತು ಅಭಿಮಾನಿಗಳ ನಡುವೆ ಬಿರುಕು ಹೆಚ್ಚಾಗುತ್ತಿರುವುದು ದುರಂತ.
ಇದರಲ್ಲಿ ಇನ್ನಷ್ಟು ಓದಿ :