ಬೆಂಗಳೂರು: ನವರಸನಾಯಕ ಜಗ್ಗೇಶ್ ಪುತ್ರ ಗುರುರಾಜ್ ವಿದೇಶೀ ಯುವತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸಂಸಾರದ ಹೆಣ್ಣುಮಕ್ಕಳ ಬಗ್ಗೆ ಹೇಳುವಾಗ ಸೊಸೆಯನ್ನೇ ಮರೆತ ಜಗ್ಗೇಶ್ ಗೆ ಅಭಿಮಾನಿಗಳೇ ನೆನಪಿಸಿದ್ದಾರೆ. ವಿಷಯ ಇಷ್ಟೇ. ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಮಗ ಮತ್ತು ಪತ್ನಿ ಪರಿಮಳಾ ಇರುವ ಫೋಟೋವೊಂದನ್ನು ಪ್ರಕಟಿಸಿ, ನಮ್ಮ ಮನೆಯಲ್ಲಿ ನಾವು ನಾಲ್ವರು ಗಂಡು ಮಕ್ಕಳು. ಇಬ್ಬರು ಪುತ್ರರು ಮತ್ತು ಮೊಮ್ಮಗ ಅರ್ಜುನ್. ಇವಳೊಬ್ಬಳೇ ಹೆಣ್ಣುಮಗಳು.