ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ ದಿನ ಅಂದರೆ ಜನವರಿ 8 ರಂದು ಕೆಜಿಎಫ್ 2 ಟೀಸರ್ ಬಿಡುಗಡೆಯಾಗುತ್ತಿದೆ. ಈ ಟೀಸರ್ ಸಕ್ಸಸ್ ಆಗಲು ಏನು ಮಾಡಬೇಕೆಂದು ರಾಕಿ ಭಾಯ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸೂತ್ರ ಹೇಳಿಕೊಟ್ಟಿದ್ದಾರೆ!ಕೆಜಿಎಫ್ 2 ಟೀಸರ್ ನ್ನು ಕೇವಲ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲೇ ನೋಡಿ. ಟೀಸರ್ ವೀಕ್ಷಣೆ ಪರಿಗಣನೆಗೆ ಬರಲು 30 ಸೆಕೆಂಡ್ ಗಿಂತ ಹೆಚ್ಚು ಹೊತ್ತು ವೀಕ್ಷಣೆ ಮಾಡಿ.