ಉಪೇಂದ್ರ ನಾಯಕನಾಗಿ ನಟಿಸಿರುವ ಐ ಲವ್ ಯೂ ಚಿತ್ರ ಅವರ ಅಭಿಮಾನಿಗಳೆಲ್ಲರೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಯಾಕೆಂದರೆ, ಉಪೇಂದ್ರ ಯಾವ ಶೈಲಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದರೋ ಅದೇ ಶೈಲಿಯ ಡೈಲಾಗುಗಳ ಝಲಕ್ಕುಗಳನ್ನು ಕಂಡು ಅಭಿಮಾನಿಗಳೆಲ್ಲ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಮೂಲಕವೇ ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಈ ಎರಡನೇ ಕಾಂಬಿನೇಷನ್ ಕಮಾಲ್ ಸೃಷ್ಟಿಸೋ ಲಕ್ಷಣಗಳೇ ದಟ್ಟೈಸಿವೆ! ಉಪೇಂದ್ರ ಹಾಗೂ ಆರ್ ಚಂದ್ರು ವರ್ಷಾಂತರಗಳ ಹಿಂದೆ