Photo Courtesy: Twitterಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಪರೂಪಕ್ಕೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಾರೆ. ಇದೀಗ ಪತ್ನಿ ರಾಧಿಕಾ ಪಂಡಿತ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವೊಂದನ್ನು ಯಶ್ ಹಂಚಿಕೊಂಡಿದ್ದಾರೆ.ಅಭಿಷೇಕ್ ಅಂಬರೀಶ್ ಮದುವೆಗೆ ಸಿದ್ಧರಾಗಿದ್ದ ಡ್ರೆಸ್ ನಲ್ಲಿ ಯಶ್-ರಾಧಿಕಾ ಫೋಟೋ ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಹಂಚಿಕೊಂಡ ಯಶ್ ‘ಹಾಗೇ ಸುಮ್ಮನೆ.. ಜೀವನ ಸುಂದರವಾಗಿದೆ’ ಎಂದು ಬರೆದುಕೊಂಡಿದ್ದರು.ಯಶ್ ಫೋಟೋ ನೋಡಿ ಫ್ಯಾನ್ಸ್ ಹೊಸ ಬೇಡಿಕೆಯಿಟ್ಟಿದ್ದಾರೆ. ಕೆಜಿಎಫ್ 3 ಸಿನಿಮಾಗೆ ನೀವಿಬ್ಬರೇ ಜೋಡಿಯಾಗಿ ಎಂದಿದ್ದಾರೆ.