ಚೆನ್ನೈ: ಕಮಲ್ ಹಾಸನ್ ನಾಯಕರಾಗಿರುವ ಬಹುತಾರಾಗಣದ ವಿಕ್ರಂ ಸಿನಿಮಾ ಇಂದಿನಿಂದ ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಮೊದಲ ಶೋ ವೀಕ್ಷಿಸಿದ ಪ್ರೇಕ್ಷಕರು 100 ಶೇಕಡಾ ಇದು ನಿರ್ದೇಶಕರ ಸಿನಿಮಾ ಎಂದಿದ್ದಾರೆ. ಸಿನಿಮಾದಲ್ಲಿ ಒಂದೊಳ್ಳೆ ಕತೆಯಿದೆ, ಅದಕ್ಕೆ ತಕ್ಕ ಸಸ್ಪೆನ್ಸ್, ಆಕ್ಷನ್ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಘಟಾನುಘಟಿ ನಟರೇ ಚಿತ್ರದ ಕೇಂದ್ರ ಬಿಂದುವಾಗಿದ್ದಾರೆ.ಸೂರ್ಯ ಕೆಲವೇ ಕ್ಷಣಗಳಷ್ಟು ತೆರೆ ಮೇಲೆ ಬಂದರೂ ನೆನಪಿನಲ್ಲುಳಿಯುವಂತೆ ಮಾಡುತ್ತಾರೆ. ಅವರ ಖದರ್, ಮಾಸ್ ಅಪಿಯರೆನ್ಸ್ ನಿಜಕ್ಕೂ ಕ್ಲೈಮ್ಯಾಕ್ಸ್ ಗೆ ಮೆರುಗು ತಂದುಕೊಟ್ಟಿದೆ