ಹೃತಿಕ್ ರೋಷನ್ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೀಗೆ ಹೇಳಿದ್ದೇಕೆ?!

ಮುಂಬೈ| Krishnaveni K| Last Modified ಭಾನುವಾರ, 10 ಜನವರಿ 2021 (09:22 IST)
ಮುಂಬೈ: ತಮ್ಮ ಬರ್ತ್ ಡೇಗೆ ಶುಭ ಕೋರಿದ ಬಾಲಿವುಡ್ ನಟ ಹೃತಿಕ್ ರೋಷನ್ ಗೆ ರಾಕಿಂಗ್ ಸ್ಟಾರ್ ಯಶ್ ಈ ರೀತಿ ಪ್ರತಿಕ್ರಿಯಿಸಿರುವುದು ಈಗ ಅಭಿಮಾನಿಗಳಲ್ಲಿ ನಾನಾ ಅನುಮಾನಗಳನ್ನು ಹುಟ್ಟುಹಾಕಿದೆ.
 

ತಮಗೆ ಶುಭ ಕೋರಿದ ಹೃತಿಕ್ ಗೆ ಧನ್ಯವಾದ ಸಲ್ಲಿಸಿದ ಯಶ್ ‘ಧನ್ಯವಾದಗಳು ಸರ್. ನಿಮ್ಮ ಕೆಲಸದಿಂದ ಪ್ರಭಾವಿತನಾಗಿದ್ದೇನೆ. ನಿಮ್ಮ ಮುಂದಿನ ಪ್ರಾಜೆಕ್ಟ್ ಗೆ ಹೆಚ್ಚು ಕಾಯಲಾರೆ’ ಎಂದು ಸ್ಮೈಲಿ ಜೊತೆಗೆ ಪ್ರತಿಕ್ರಿಯಿಸಿದ್ದಾರೆ. ಯಶ್ ಈ ರೀತಿ ಪ್ರತಿಕ್ರಿಯಿಸಿರುವುದು ನೋಡಿ ಅಭಿಮಾನಿಗಳು ಹೃತಿಕ್ ಮುಂದಿನ ಸಿನಿಮಾ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರಬಹುದು ಅಥವಾ ಯಶ್ ಜೊತೆಗೆ ಮುಂದಿನ ಸಿನಿಮಾ ಅನೌನ್ಸ್ ಮಾಡಬಹುದು ಎಂದು ಊಹಿಸಿದ್ದಾರೆ. ಇಂದು ಹೃತಿಕ್ ರೋಷನ್ ಬರ್ತ್ ಡೇ ಇದ್ದು, ಈ ದಿನವೇ ಈ ಸಿಹಿ ಸುದ್ದಿ ಅನೌನ್ಸ್ ಆಗಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :