ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ಜೀವಂತ

ಬೆಂಗಳೂರು| Krishnaveni K| Last Modified ಬುಧವಾರ, 24 ನವೆಂಬರ್ 2021 (08:45 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿರಬಹುದು. ಆದರೆ ಅವರಿನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಜೀವಂತವಾಗಿದ್ದಾರೆ.

ಯಾವುದೇ ಹಬ್ಬ, ವಿಶೇಷ ದಿನಗಳಿರಲಿ, ಇಲ್ಲದೇ ಇರಲಿ, ಪುನೀತ್ ಅಭಿಮಾನಿಗಳು ಅವರ ಕುರಿತಾದ ಹಳೆಯ ವಿಡಿಯೋಗಳನ್ನು, ಫೋಟೋಗಳನ್ನು ಹರಿಯಬಿಟ್ಟು ಅವರನ್ನು ಜೀವಂತವಾಗಿರಿಸಿದ್ದಾರೆ.


ಪುನೀತ್ ಗೆ ಸಂಬಂಧಿಸಿದ ಹಳೆಯ, ಯಾರೂ ನೋಡಿರದ ಅಪರೂಪದ ಫೋಟೋಗಳು, ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಿವೆ. ಆ ಮೂಲಕ ಈ ಲೋಕದಿಂದ ಅಗಲಿದರೂ ತಮ್ಮ ನೆಚ್ಚಿನ ನಟನನ್ನು ಅಭಿಮಾನಿಗಳು ಪ್ರತಿನಿತ್ಯ ನೆನೆಸಿಕೊಳ್ಳುತ್ತಲೇ ಇದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :