Widgets Magazine

ಮಗು ಜತೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಫೋಟೋ ನೋಡಿ ಜನ ಏನಂದ್ರು ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 5 ಡಿಸೆಂಬರ್ 2019 (09:17 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳು ಐರಾ ಯಶ್ ಬರ್ತ್ ಡೇ ಸಂಭ್ರಮದಲ್ಲಿ ಇಡೀ ತಾರಾ ಲೋಕವೇ ಹಾಜರಿತ್ತು. ಈ ನಡುವೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಫೋಟೋ ಒಂದು ಪ್ರಕಟಿಸಿ ಈಗ ಪೇಚಿಗೆ ಸಿಲುಕಿದ್ದಾರೆ.

 
ಹಿರಿಯ ನಟ, ನಿರ್ದೇಶಕ ಟಿಎಸ್ ನಾಗಾಭರಣ ಮೊಮ್ಮಗನನ್ನು ಎತ್ತಿಕೊಂಡಿರುವ ಫೋಟೋವನ್ನು ರಾಗಿಣಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದರು. ಅದೂ ಪಕ್ಕಾ ತಮ್ಮದೇ ಮಗುವೇನೋ ಎನ್ನುವಂತೆ. ಇದನ್ನು ನೋಡಿ ಜನ ನಿಮ್ದು ಯಾವಾಗ ಅಂತ ರಾಗಿಣಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ.
 
ಪ್ರಜ್ವಲ್ ಮತ್ತು ರಾಗಿಣಿ ಮದುವೆಯಾಗಿ ಕೆಲವು ವರ್ಷಗಳೇ ಆಗಿವೆ. ಇನ್ನೂ ಇಬ್ಬರ ಕಡೆಯಿಂದ ಸಿಹಿ ಸುದ್ದಿ ಬಂದಿಲ್ಲ. ಇದೀಗ ಪ್ರಜ್ವಲ್ ಹೆಗಲ ಮೇಲೆ ನಾಗಾಭರಣ ಮೊಮ್ಮಗ ಜತೆಗೆ ರಾಗಿಣಿ ನಿಂತಿರುವ ಫೋಟೋ ನೋಡಿ ನಿಮ್ಮನ್ನೂ ನಾವು ಶೀಘ್ರದಲ್ಲೇ ಹೀಗೆ ನೋಡುವ ಹಾಗೆ ಆಗಲಿ ಎಂದು ಕೆಲವರು ಹೇಳಿದರೆ, ಜ್ಯೂನಿಯರ್ ಪ್ರಜ್ಜು ಬರೋದು ಯಾವಾಗ ಎಂದು ರಾಗಿಣಿಗೆ ಪ್ರಶ್ನೆ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :