ಬೆಂಗಳೂರು: ಮಗುವಾದ ಮೇಲೆ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದ ದೂರವೇ ಇದ್ದ ನಟಿ ರಾಧಿಕಾ ಪಂಡಿತ್ ಇದೀಗ ಮತ್ತೆ ಫೇಸ್ ಬುಕ್ ನಲ್ಲಿ ಆಗಾಗ ಪೋಸ್ಟ್ ಮಾಡುತ್ತಿದ್ದಾರೆ.ಈ ನಡುವೆ ರಾಧಿಕಾ ಪಂಡಿತ್ ತಾವು ವಿಡಿಯೋ ಸಂದೇಶವನ್ನು ಮಾಡಲು ರೆಡಿಯಾಗುತ್ತಿರುವ ವಿಡಿಯೋ ಒಂದನ್ನು ಪ್ರಕಟಿಸಿ ನಾನು ಕೆಲವು ದಿನಗಳಿಂದ ಪ್ರಕಟಿಸುತ್ತಿದ್ದ ವಿಡಿಯೋಗಳಿಗೆ ಅದನ್ನು ಮಾಡಿದವರ ಕ್ರೆಡಿಟ್ ಕೊಟ್ಟಿರಲಿಲ್ಲ. ಈ ವಿಡಿಯೋ ನೋಡಿ ನನ್ನ ವಿಡಿಯೋ ಮಾಡುವವರು ಯಾರು ಎಂದು ಗೊತ್ತಾಗುತ್ತದೆ.