Widgets Magazine

ರಾಹುಲ್ ದ್ರಾವಿಡ್ ಮನೆಗೇ ಹೋಗಿ ವೀಕೆಂಡ್ ವಿತ್ ರಮೇಶ್ ಗೆ ಕರ್ಕೊಂಡು ಬನ್ನಿ!

ಬೆಂಗಳೂರು| Krishnaveni K| Last Modified ಶನಿವಾರ, 20 ಏಪ್ರಿಲ್ 2019 (06:40 IST)
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ನಾಲ್ಕನೇ ಸೀಸನ್ ಇಂದಿನಿಂದ ಆರಂಭವಾಗಲಿದ್ದು, ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ರನ್ನು ಶೋಗೆ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆದಿದೆ.
 
ದ್ರಾವಿಡ್ ರನ್ನು ಶೋಗೆ ಕರೆತರಲು ಟ್ವಿಟರ್ ನಲ್ಲಿ #WWRDravid ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಅಭಿಯಾನವನ್ನೇ ಶುರು ಮಾಡಿದೆ. ಈ ಟ್ವೀಟ್ ಅಭಿಯಾನಕ್ಕೆ ಕನ್ನಡಿಗರು ಮಾತ್ರವಲ್ಲದೆ ಬೇರೆ ಭಾಷೆಯ ಪ್ರೇಕ್ಷಕರು, ಅಭಿಮಾನಿಗಳಿಂದಲೂ ಪ್ರತಿಕ್ರಿಯೆಯ ಮಹಾಪೂರವೇ ಹರಿದುಬರುತ್ತಿದೆ.
 
ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಟ್ವಿಟರ್ ನಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಜತೆಗೆ ನಿರೂಪಕ ರಮೇಶ್ ಅರವಿಂದ್ ಅವರಿಗೆ ನೇರವಾಗಿ ದ್ರಾವಿಡ್ ಮನೆಗೆ ಹೋಗಿ ನೀವೇ ಅವರನ್ನು ಒಪ್ಪಿಸಿ ಕಾರ್ಯಕ್ರಮಕ್ಕೆ ಕರೆತನ್ನಿ ಎಂದು ಸಲಹೆಯನ್ನೂ ಕೊಡುತ್ತಿದ್ದಾರೆ. ಮತ್ತೆ ಕೆಲವರು ನಮಗೆ ಭಾಷೆ ಬರದಿದ್ದರೂ ದ್ರಾವಿಡ್ ಈ ಕಾರ್ಯಕ್ರಮಕ್ಕೆ ಬರುವುದನ್ನು ಎದುರು ನೋಡುತ್ತಿದ್ದೇವೆ. ಅವರ ಕತೆ ಕೇಳಲು ಉತ್ಸುಕರಾಗಿದ್ದೇವೆ. ಅವರೊಬ್ಬ ಲೆಜೆಂಡ್. ಅವರು ಕಾರ್ಯಕ್ರಮಕ್ಕೆ ಬಂದರೆ ಸಾಧಕರ ಸೀಟ್ ಗೇ ಗೌರವ ಬಂದಂತೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಈ ಅಭಿಮಾನಿಗಳ ಕರೆಗೆ ದ್ರಾವಿಡ್ ಓಗೊಡುತ್ತಾರಾ ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       
ಇದರಲ್ಲಿ ಇನ್ನಷ್ಟು ಓದಿ :