ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಲವು ಸಮಯದ ಬಳಿಕ ಸೋಷಿಯಲ್ ಮೀಡಿಯಾಕ್ಕೆ ಮರಳಿ ಬಂದಿದ್ದೇ ತಡ. ಅವರು ಸಿನಿಮಾ ರಂಗಕ್ಕೆ ಮತ್ತೆ ಬರಬಹುದು ಎಂಬ ಅಭಿಮಾನಿಗಳ ಆಸೆ ಚಿಗುರೊಡೆದಿದೆ. ರಮ್ಯಾ ಇನ್ ಸ್ಟಾಗ್ರಾಂನಲ್ಲಿ ಏನೇ ಪೋಸ್ಟ್ ಮಾಡಿದರೂ ಅಭಿಮಾನಿಗಳು ಈಗ ನಿಮ್ಮನ್ನು ಮತ್ತೆ ತೆರೆ ಮೇಲೆ ನೋಡಬೇಕು, ಕಮ್ ಬ್ಯಾಕ್ ಮಾಡಿ ಎಂದು ಕೇಳುತ್ತಲೇ ಇದ್ದಾರೆ.ಸದ್ಯಕ್ಕೆ ರಾಜಕೀಯದಲ್ಲೂ ಸಕ್ರಿಯವಾಗಿಲ್ಲದ ರಮ್ಯಾ ಮುಂದೊಂದು ದಿನ ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಸಿನಿಮಾ