Widgets Magazine

ರಜನಿಕಾಂತ್ ಮಾಡಿದ ಈ ಕೆಲಸಕ್ಕೆ ಬೇಸರಗೊಂಡ ಅಭಿಮಾನಿಗಳು

ಚೆನ್ನೈ| pavithra| Last Updated: ಭಾನುವಾರ, 18 ಅಕ್ಟೋಬರ್ 2020 (10:12 IST)
ಚೆನ್ನೈ : ಕಾಲಿವುಡ್ ನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಪಾರ ಅಭಿಮಾನ ಬಳಗವನ್ನು ಹೊಂದಿದ್ದಾರೆ. ಆದರೆ ಇದೀಗ ರಜನಿಕಾಂತ್ ಮಾಡಿದ ಈ ಕೆಲಸದಿಂದ ಅವರ ಅಭಿಮಾನಿಗಳು ಅವರ ವಿರುದ್ಧ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ನಟ ರಜನಿಕಾಂತ್ ಅವರು ಇತ್ತೀಚೆಗೆ ತಮ್ಮ ಒಡೆತನದ ರಾಘವೇಂದ್ರ ವಿವಾಹ ಮಂಟಪದ ಆಸ್ತಿ ತೆರಿಗೆ ಕಟ್ಟುವ ವಿಚಾರದಲ್ಲಿ ಸರ್ಕಾರ ವಿರುದ್ಧ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಬಳಿಕ ಹೈಕೋರ್ಟ್ ಆದೇಶದಂತೆ ತೆರಿಗೆ ಪಾವತಿಸಿದ್ದಾರೆ.

ಈ ಬಗ್ಗೆ ರಾಜಕೀಯ ಕಾರ್ಯಕರ್ತ ಮತ್ತು ಹಿರಿಯ ಪತ್ರಕರ್ತ ಗಣಪತಿ ರಜನಿಕಾಂತ್ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದು, ಅದು ವೈರಲ್ ಆಗಿತ್ತು. ಹೀಗಾಗಿ ತಮಿಳು ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದ ರಜನಿಕಾಂತ್ ಅವರು ಕೇವಲ 6 ಲಕ್ಷ ರೂ.ಗಾಗಿ ನ್ಯಾಯಾಲದ ಮೆಟ್ಟಿಲೇರಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :