Widgets Magazine

ತಂತ್ರಜ್ಞಾನದ ಬಳಕೆಯತ್ತ ಸಿನಿಮಾಗಳ ಚಿತ್ತ

ಬೆಂಗಳೂರು| Krishnaveni K| Last Modified ಶನಿವಾರ, 16 ಮೇ 2020 (09:03 IST)
ಬೆಂಗಳೂರು: ಕೊರೋನಾದಿಂದಾಗಿ ಚಿತ್ರರಂಗದ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಹೊರಾಂಗಣ ಚಿತ್ರೀಕರಣ ಸಾಧ್ಯವಾಗುತ್ತಿಲ್ಲ. ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿಲ್ಲ. ಹಾಗಂತ ಅರ್ಧಕ್ಕೇ ನಿಂತ ಸಿನಿಮಾಗಳನ್ನು ಹಾಗೆಯೇ ಬಿಟ್ಟರೆ ನಿರ್ಮಾಪಕರ ಜೇಬಿಗೆ ಭಾರೀ ನಷ್ಟವಾಗುವುದು ಖಂಡಿತಾ.

 
ಹೀಗಾಗಿ ಈಗ ಸ್ಯಾಂಡಲ್ ವುಡ್, ಬಾಲಿವುಡ್ ಸೇರಿದಂತೆ ಎಲ್ಲಾ ಸಿನಿಮಾ ರಂಗದವರೂ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನಕೊಡುತ್ತಿದ್ದಾರೆ.
 
ಸಿನಿಮಾದಲ್ಲಿ ಬಾಕಿಯಿರುವ ಕೆಲವೇ ಪೋರ್ಷನ್ ಶೂಟಿಂಗ್ ಮಾಡಲು ಸಾಧ್ಯವಾಗದೇ ಗ್ರಾಫಿಕ್ಸ್ ನಲ್ಲೇ ಅದನ್ನು ತೋರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇನ್ನು, ಕೆಲವರು ಡಿಜಿಟಲ್ ಫ್ಲ್ಯಾಟ್ ಫಾರಂ ಮೂಲಕ ಚಿತ್ರ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.
 
ಈಗಾಗಲೇ ಬಾಲಿವುಡ್ ನಲ್ಲಿ ಆಪ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರಮಂದಿರಗಳ ಮಾಲಿಕರಿಂದ ವಿರೋಧ ವ್ಯಕ್ತವಾಗಿದೆ. ತಮಿಳುನಾಡಿನಲ್ಲೂ ಇದೇ ರೀತಿಯ ಅಸಮಾಧಾನದ ಕೂಗು ಕೇಳಿಬಂದಿತ್ತು. ಆದರೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಇಲ್ಲದೇ ಹೋದಾಗ ಸಿನಿಮಾ ತಂಡಗಳಿಗೂ ಬೇರೆ ದಾರಿಯಿಲ್ಲದಂತಾಗಿದೆ.
ಇದರಲ್ಲಿ ಇನ್ನಷ್ಟು ಓದಿ :