Widgets Magazine

‘ಮದಗಜ’ ಚಿತ್ರಕ್ಕೆ ನಾಯಕಿಯಾಗುತ್ತಿರುವ ಆ ಸ್ಟಾರ್ ನಟಿ ಯಾರು? ನೀವೇ ಹೇಳಬೇಕು!

ಬೆಂಗಳೂರು| Krishnaveni K| Last Modified ಗುರುವಾರ, 13 ಫೆಬ್ರವರಿ 2020 (11:45 IST)
ಬೆಂಗಳೂರು: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರತಂಡ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ.
 

ಫಸ್ಟ್ ಲುಕ್ ನಲ್ಲಿ ಹೀರೋಯಿನ್ ಬೆನ್ನಿನ ಭಾಗ ಮಾತ್ರ ತೋರಿಸಲಾಗಿದ್ದು, ಈ ಚಿತ್ರಕ್ಕೆ ಸ್ಟಾರ್ ನಟಿಯೊಬ್ಬರು ನಾಯಕಿಯಾಗುತ್ತಿದ್ದಾರೆ. ಅವರು ಯಾರೆಂದು ಗುರುತಿಸಿ ಎಂದು ಸುಳಿವು ಕೊಟ್ಟಿದೆ.
 
ಪೋಸ್ಟ್ ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಇವರು ಸಾನ್ವಿ ಶ್ರೀವಾಸ್ತವ್ ಇರಬಹುದು ಎಂದರೆ ಮತ್ತೆ ಕೆಲವರು ಕೃತಿ ಕರಬಂದ ಇರಬಹುದು ಎನ್ನುತ್ತಿದ್ದಾರೆ. ಹೀಗೆ ತಮಗೆ ತೋಚಿದ ಹೆಸರು ಹಾಕಿ ಊಹೆ ಮಾಡುತ್ತಿದ್ದಾರೆ. ನಿಜವಾಗಿಯೂ ಆ ಹೀರೋಯಿನ್ ಯಾರು ಎಂದು ತಿಳಿಯಬೇಕಾದರೆ ನೀವು ಕಾಯಬೇಕು.
ಇದರಲ್ಲಿ ಇನ್ನಷ್ಟು ಓದಿ :