ಮುಂಬೈನ ನಾಯಗನ್ ಪ್ರದೇಶದ ಮ್ಯಾಗ್ನಂ ಸ್ಟುಡಿಯೋದ ಲ್ಲಿ ನಡೆಯುತ್ತಿದ್ದ ಕನ್ನಡದ ಜನಪ್ರಿಯ ಧಾರಾವಾಹಿ ಹರಹರ ಮಹಾದೇವ ಸೆಟ್``ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಳಗ್ಗೆ 11.30ಕ್ಕೆ ಶಾರ್ಟ್ ಸರ್ಕ್ಯೂಟ್`ನಿಂದ ಹೊತ್ತಿಕೊಂಡ ಬೆಂಕಿ ಬಳಿಕ ಇತರೆಡೆಗೂ ಆವರಿಸಿದೆ. 1 ಕೋಟಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ ಎಂದು ವರದಿಯಾಗಿದೆ. ಚಿತ್ರೀಕರಣದ ಸೆಟ್ ಸಂಪೂರ್ಣ ಸುಟ್ಟುಹೋಗಿದೆ. ಮರದ ವಸ್ತುಗಳೂ ಇದ್ದದ್ದರಿಂದ ಬೆಂಕಿ ಹೆಚ್ಚು ಆವರಿಸಿದೆ ಎನ್ನಲಾಗಿದೆ.