Widgets Magazine

‘ಭಜರಂಗಿ 2’ ಸಿನಿಮಾ ಸೆಟ್ ಗೆ ಬೆಂಕಿ: ಅಪಾಯದಿಂದ ಪಾರಾದ ಶಿವರಾಜ್ ಕುಮಾರ್

ಬೆಂಗಳೂರು| Krishnaveni K| Last Updated: ಶುಕ್ರವಾರ, 17 ಜನವರಿ 2020 (15:45 IST)
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಸೆಟ್ ನಲ್ಲಿ ಬೆಂಕಿ ಅನಾಹುತವಾಗಿದ್ದು ಚಿತ್ರ ತಂಡ ಅಪಾಯದಿಂದ ಪಾರಾಗಿದೆ.
 

ಶೂಟಿಂಗ್ ಲೈಟ್ ಓವರ್ ಹೀಟ್ ಆಗಿ ಬ್ಲಾಸ್ಟ್ ಆಗಿದ್ದು, ಗುಹೆಯ ಸೆಟ್ ಹಾಕಿದ್ದ ಚಿತ್ರೀಕರಣ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಹಲವು ಮಂದಿ ಸೆಟ್ ನಲ್ಲೇ ಇದ್ದರು ಎನ್ನಲಾಗಿದೆ. ಆದರೆ ಶಿವಣ್ಣ ಆ ವೇಳೆ ತಮ್ಮ ಕ್ಯಾರಾವ್ಯಾನ್ ನಲ್ಲಿ ವಿಶ್ರಾಂತಿಯಲ್ಲಿದ್ದರು.
 
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೆಟ್ ಬೆಂಕಿಗೆ ಆಹುತಿಯಾಗಿದೆ. ಆದರೆ ಯಾರಿಗೂ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :