ನಟ ಯಶ್ ಅಭಿನಯದ ಅದ್ಧೂರಿ ಚಲನಚಿತ್ರ ಕೆಜಿಎಫ್ – 2 ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 23 ರಂದು ಬಹುನಿರೀಕ್ಷಿತ ಚಲನಚಿತ್ರ ಕೆಜಿಎಫ್ 2 ಬಿಡುಗಡೆಯಾಗಲಿದೆ. ಕೆಜಿಎಫ್ ಚಲನಚಿತ್ರ ಭಾರತೀಯ ಚಿತ್ರಗಳಲ್ಲೇ ಇತಿಹಾಸ ನಿರ್ಮಾಣ ಮಾಡಿತ್ತು. ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಇದೀಗ ಕೆಜಿಎಫ್ 2 ಚಲನಚಿತ್ರ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದ್ದು, ಅಕ್ಟೋಬರ್ 23 ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.