ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇಂದು ನಾಲ್ಕು ಕುತೂಹಲ ಕೆರಳಿಸಿರುವ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಈ ವೀಕೆಂಡ್ ಹಬ್ಬ ಮಾಡಬಹುದು.ವಿಜಯ್ ರಾಘವೇಂದ್ರ ವಯಸ್ಸಾದ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ನೈಜ ಘಟನೆಯಾಧಾರಿತ ಕತೆಯುಳ್ಳ ಸಿನಿಮಾ ಮಾಲ್ಗುಡಿ ಡೇಸ್ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು, ಟ್ರೈಲರ್ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದ್ದು, ವಿಜಯ್ ರಾಘವೇಂದ್ರರಿಗೆ ಒಂದು ಬ್ರೇಕ್ ನೀಡಬಹುದು ಎಂದೇ ನಿರೀಕ್ಷಿಸಲಾಗಿದೆ.ಪ್ರೀಮಿಯರ್ ಪದ್ಮಿನಿ ಸಿನಿಮಾ ಮೂಲಕ ಗಮನ ಸೆಳೆದಿದ್ದ ಪ್ರಮೋದ್