ಮೋಸದಿಂದ ‘ದಿ ವಿಲನ್’ ಚಿತ್ರ ನೋಡಲು ಬಂದ ಭೂಪರು

ಬೆಂಗಳೂರು| pavithra| Last Modified ಶುಕ್ರವಾರ, 19 ಅಕ್ಟೋಬರ್ 2018 (07:43 IST)
ಬೆಂಗಳೂರು : ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಜೊತೆಯಾಗಿ ನಟಿಸಿದ ‘ದಿ ವಿಲನ್’ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆಗೊಂಡಿದೆ. ಆದರೆ ಈ ವೇಳೆ ಕೆಲವು ಪುಂಡರು ನಕಲಿ ಟಿಕೆಟ್ ನೊಂದಿಗೆ ಚಿತ್ರ ನೋಡಲು ಪ್ರಯತ್ನಿಸಿದ್ದಾರೆ.

ಹೌದು. ಅಭಿಮಾನಿಗಳು ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಬಹುನಿರೀಕ್ಷೆಯ ಚಿತ್ರ ‘ದಿ ವಿಲನ್’ ಮೊದಲ ದಿನದ ಪ್ರದರ್ಶನವನ್ನು ವೀಕ್ಷಿಸಲು ಅಭಿಮಾನಿಗಳು ಮುಗಿ ಬಿದ್ದಿದ್ದರು. ಇದನ್ನೇ ದುರಪಯೋಗಪಡಿಸಿಕೊಂಡ ಕೆಲವರು ಟಿಕೆಟನ್ನು ಕಲರ್ ಜೆರಾಕ್ಸ್ ಮಾಡಿಸಿಕೊಂಡು ಬಂದು ಚಿತ್ರಮಂದಿರ ಪ್ರವೇಶಿಸಿದ್ದಾರೆ.


ಚಾಮರಾಜನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಈ ಘಟನೆ ನಡೆದಿದ್ದು, ಈ ಚಿತ್ರಮಂದಿರದಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ‘ದಿ ವಿಲನ್’ ಪ್ರದರ್ಶನ ಆರಂಭವಾಗಿತ್ತು. ಆ ವೇಳೆ ನಕಲಿ ಟಿಕೆಟ್ ನೊಂದಿಗೆ ಬಂದಿದ್ದವರನ್ನು ಗುರುತಿಸಿದ ಚಿತ್ರಮಂದಿರದ ಸಿಬ್ಬಂದಿಗಳು ಅಲ್ಲಿಂದ ಹೊರಗೆ ತಳ್ಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :