ಈ ಮೂರು ಶುಕ್ರವಾರ ಕನ್ನಡ ಸಿನಿಮಾ ರಂಗಕ್ಕೆ ಸ್ಪೆಷಲ್ ಡೇ

ಬೆಂಗಳೂರು| Krishnaveni K| Last Modified ಮಂಗಳವಾರ, 29 ಅಕ್ಟೋಬರ್ 2019 (09:08 IST)
ಬೆಂಗಳೂರು: ಈ ಶುಕ್ರವಾರ ಅಂದರೆ ನವಂಬರ್ 1 ರಾಜ್ಯೋತ್ಸವದಂದು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ದಿನ. ಅದಕ್ಕೆ ಕಾರಣಗಳು ಮೂರು.

 
ಮೊದಲನೆಯದಾಗಿ ಇದೇ ದಿನ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬಂದಿದ್ದು, ಹಾರರ್ ಕತೆಯೊಂದನ್ನು ಹೇಳಲಾಗಿದೆ.
 
ಇನ್ನು ಇದೇ ದಿನ ಮಹಿಳಾ ಪ್ರಧಾನ ಚಿತ್ರ ರಂಗನಾಯಕಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾದಲ್ಲಿ ಅದಿತಿ ಪ್ರಭುದೇವ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
 
ಮತ್ತೊಂದು ವಿಶೇಷವೆಂದರೆ ಇದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ. ಒಡೆಯ ಸಿನಿಮಾ ಬಗ್ಗೆ ದರ್ಶನ್ ಅಭಿಮಾನಿಗಳಲ್ಲಿ ಸಾಕಷ್ಟು ಕಾತುರತೆಯಿದೆ. ಈ ಸಿನಿಮಾದ ಲುಕ್ ಕೂಡಾ ಕುತೂಹಲಕಾರಿಯಾಗಿದೆ. ಹೀಗಾಗಿ ಟೀಸರ್ ಹೇಗಿರಬಹುದು ಎಂಬುದಕ್ಕೆ ಇದೇ ದಿನ ಉತ್ತರ ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :