ಸಿನಿಮಾ ರಂಗದಲ್ಲಿ ನಟ, ನಟಿಯರಾಗಿ, ನಿರ್ದೇಶಕರಾಗಿ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಿಂಚಬೇಕೆಂಬುದು ಅದೆಷ್ಟೋ ಜನರ ಕನಸು. ಆದರೆ ಸರಿಯಾದ ತರಬೇತಿ ಮಾರ್ಗಗಳಿಲ್ಲದೇ ಅಂಥವರಲ್ಲಿ ಹೆಚ್ಚಿನವರು ಪ್ರತಿಭೆ ಇದ್ದರೂ ನಿರಾಸೆಗೀಡಾಗುವಂಥಾ ವಾತಾವರಣವಿದೆ. ಇದನ್ನು ನೀಗಿಸಿ ಹೊಸಾ ಪ್ರತಿಭೆಗಳನ್ನು ಎಲ್ಲ ರೀತಿಯಲ್ಲಿಯೂ ಅಣಿಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ಜಿ ಅಕಾಡೆಮಿ ಎಂಬ ಸಿನಿಮಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇಲ್ಲಿ ಅವರವರ ಆಸಕ್ತಿಗನುಗುಣವಾಗಿ ಎಲ್ಲ ವಿಭಾಗಗಳಲ್ಲಿಯೂ ತರಬೇತಿ ಕೊಡುವ ವ್ಯವಸ್ಥೆಯನ್ನು ಗುರು