ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್-ದಿಗಂತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಗಾಳಿಪಟ 2 ಸಿನಿಮಾ ಶೂಟಿಂಗ್ ಮತ್ತೆ ಆರಂಭವಾಗಲಿದೆ.ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ನೆನೆಗುದಿದೆ ಬಿದ್ದಿದೆ. ಕಳೆದ ಬಾರಿ ಲಾಕ್ ಡೌನ್ ಮುಗಿದ ಮೇಲೆ ಕೆಲವು ಭಾಗದ ಚಿತ್ರೀಕರಣ ನಡೆಸಲಾಗಿತ್ತು.ಈಗ ಮತ್ತೆ ನಾಳೆಯಿಂದ ಬಾಕಿ ಉಳಿದ ಭಾಗಗಗಳ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ. ಇದೀಗ ಕೊರೋನಾ ಅಲೆ