ಫ್ಯಾನ್ಸ್ ಗೆ ಇನ್ಮುಂದೆ ನಿರಾಸೆ ಮಾಡಲ್ಲ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು| Krishnaveni K| Last Modified ಮಂಗಳವಾರ, 12 ಜನವರಿ 2021 (09:07 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳು ಬಿಡುಗಡೆಯಾಗಿ ಅದೆಷ್ಟೋ ಸಮಯವೇ ಆಯ್ತು. ಆದರೆ ಈ ವರ್ಷ ಗಣಿ ಅಭಿಮಾನಿಗಳಿಗೆ ನಿರಾಸೆಯಾಗಲ್ಲ.
 

ಕಾರಣ ಈ ವರ್ಷ ಗಣೇಶ್ ಸಾಲು ಸಾಲು ಸಿನಿಮಾಗಳನ್ನು ಮುಗಿಸಲಿದ್ದಾರೆ. ಗಾಳಿಪಟ 2, ತ್ರಿಬ್ಬಲ್ ರೈಡಿಂಗ್, ಸಖತ್ ಸಿನಿಮಾಗಳು ಶೂಟಿಂಗ್ ಹಂತದಲ್ಲಿದೆ. ಅದರಲ್ಲಿ ತ್ರಿಬಲ್ ರೈಡಿಂಗ್ ಇದೀಗ ಶೂಟಿಂಗ್ ನಡೆಯುತ್ತಿದ್ದು, ಸಿಂಪಲ್ ಸುನಿ ನಿರ್ದೇಶನದ ಸಖತ್ ಜನವರಿ 20 ರಿಂದ ಬೆಂಗಳೂರಿನಲ್ಲಿ ಶೂಟಿಂಗ್ ಪುನರಾರಂಭಿಸಲಿದೆ. ಗಾಳಿಪಟ 2 ಸಿನಿಮಾ ಕೂಡಾ ಕೆಲವೇ ಕೆಲವು ಭಾಗದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಈ ವರ್ಷ ಗಣೇಶ್ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದರಲ್ಲಿ ಇನ್ನಷ್ಟು ಓದಿ :