ಒಂದು ಕಾಲದಲ್ಲಿ ಕಲಾಸಾಮ್ರಾಟ್ ಎಸ್ ನಾರಾಯಣ್ ಮತ್ತು ಗಣೇಶ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಈಗ ಅದು ಸಂಪೂರ್ಣ ಹಳಸಿದೆ. ಒಬ್ಬರಿಗೊಬ್ಬರು ನೋಟೀಸ್ ಕಳುಹಿಸಿಕೊಳ್ಳುವ ಮೂಲಕ ತಮ್ಮ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ, ಗಣೇಶ್ ಅವರು ರೂ.75 ಲಕ್ಷ ಪರಿಹಾರಧನ ಕೊಡಬೇಕೆಂದು ನಾರಾಯಣ್ಗೆ ನೋಟೀಸ್ ರವಾನಿಸಿದ್ದಾರೆ. ಜಾಹೀರಾತೊಂದರಲ್ಲಿ ತಮ್ಮ ಅನುಮತಿ ಇಲ್ಲದೆ ತನ್ನ ಫೋಟೋ ಬಳಸಿಕೊಂಡಿದ್ದಾರೆ ಎಂಬುದು ಗಣೇಶ್ ಆರೋಪ. ಇದಕ್ಕೆ ತಮಗೆ